RSS

Adi Lakshmi Devi Karthika-2011

ಆದಿಲಕ್ಷ್ಮಿ ಕಾರ್ತಿಕ 

ಹೊರಕೆರೆದೇವರಪುರದಲ್ಲಿನ ಆದಿಲಕ್ಷ್ಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಶುಕ್ರವಾರದ ಪ್ರಯುಕ್ತ  ಶ್ರೀ ಆದಿಲಕ್ಷ್ಮಿ ದೇವಿ ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು….

***

 

Tags:

ಹೊರಕೆರೆದೇವರಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಜಾತ್ರೆ

ಬ್ರಹ್ಮರಥೋತ್ಸವ
_________________________________

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೊರಕೆರೆದೇವರಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವೇದ ಮಂತ್ರ, ಘೋಷಗಳ ನಾದದಲ್ಲಿ ವಿಜೃಂಭಣೆಯಿಂದ ಇದೆ ಮಾರ್ಚ್ 1 ಸೋಮವಾರದಂದು ನೆರವೇರಿತು. ಮಧ್ಯಾಹ್ನ 4:30 ಕ್ಕೆ ಸರಿಯಾಗಿ ಭಕ್ತರು ರಥವನ್ನು ಭಕ್ತಿಯಿಂದ ಎಳೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

ರಥವನ್ನು ಎಳೆಯುವಾಗ ಬಾಳೆಹಣ್ಣು, ತೂರುಬೆಲ್ಲ, ಮೆಣಸು ಮತ್ತು ಹೂವುಗಳನ್ನು ರಥದ ಮೇಲೆ ತೂರಿ ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸಿದರು. ರಥೋತ್ಸವದ ಸಮಯದಲ್ಲಿ ಚಲಿಸುವ ರಥದ ಸುತ್ತ ಗರುಡವು ಹಾರಾಡುತ್ತ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕುವ ಲೀಲೆಯ ದಿವ್ಯದರ್ಶನವನ್ನು ಕಂಡು ಭಕ್ತರು ಪುನೀತರಾದರು. ಹಾಗು ಮರು ದಿನ ಬೆಳಗಿನ ಜಾವ 4.30ಕ್ಕೆ ಮತೊಮ್ಮೆ ರಥವನ್ನು ಎಳೆಯಲಾಯಿತು, ಮಾರ್ಚ್ 2 ರಂದು ಭೂತಬಲಿಸೇವಾ, ಶೇಷೋತ್ಸವ, ಪೀಠೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ, ಅಶ್ವ ವಾಹನೋತ್ಸವ, ಪಾರ್ವಟೋತ್ಸವಗಳು ನಡೆಯಿತು. ಮಾರ್ಚ್ 3 ರಂದು ಓಕಳಿ ಉತ್ಸವ, ನವಿಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವಗಳು ನಡೆಯಿತು. ಮಾರ್ಚ್ 4 ರಂದು ಸೂರ್ಯ ಮಂಡಲೋತ್ಸವ, ಶಯನೋತ್ಸವಗಳು ನಡೆಯಿತು.

ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಬಾಗವಹಿಸಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ಜಾತ್ರೆಯ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

***

 

Tags: , , ,

ಕೃಷ್ಣಾಚಲ

ಕರೆಕಲ್ಲು ಬೆಟ್ಟ

ಹೊರಕೆರೆದೇವರಪುರ ಪಶ್ಚಿಮಭಾಗದಲ್ಲಿ ಕೇವಲ ಒಂದೂವರೆ ಮೈಲಿ ದೂರದಲ್ಲಿ ಕೃಷ್ಣಾಚಲವಿದೆ (ಈಗಿನ ಕರೆಕಲ್ಲು ಬೆಟ್ಟ)

ಕೃಷ್ಣಾಚಲದಲ್ಲಿ ಸ್ವಾಮಿಯ ಶ್ರೀಪಾದ ಸನ್ನಿಧಿಯಿದೆ, ಈ ಸನ್ನಿಧಿಯಲ್ಲಿ ಇರುವ ಸ್ವಾಮಿಗೆ ರಂಗನಾಥಸ್ವಾಮಿ ಯಂದು ಭಕ್ತರು ಕರೆಯುತ್ತಾರೆ.  ಹಿಂದೆ ಶ್ರೀ ಸ್ವಾಮಿಯು ತಿರುಪತಿಯಿಂದ ಇಲ್ಲಿಗೆ ಬಂದು ಬಾಣಸರಸ್ಸಿನ ಹತ್ತಿರ ಕುಳಿತು ನಂದನಗರಿಯ ಮೇಲೆ ತಿಷ್ಣ ದೃಷ್ಠಿ ಬೀರಿ ನಂದನಗರಿಯನ್ನು ಸುಟ್ಟುನೆಂದು ಪ್ರತೀತಿಯಿದೆ. ಕೃಷ್ಣಾಚಲದ ರಂಗನಾಥಸ್ವಾಮಿಯ ಸನ್ನಿಧಿಗೆ ದಿನನಿತ್ಯ ಭಕ್ತಾದಿಗಳು ಬಂದು ಸೇವೆಗಳನ್ನು ಸಮರ್ಪಿಸುವುದುಂಟು.

ಈ ಕರೆಕಲ್ಲು ಬೆಟ್ಟದ ಮೇಲೆ ಹನ್ನೆರಡು ವರ್ಷಗಳಿಗೊಮ್ಮೆ ಗುಂಡಿನ ಸೇವೆ ಎಂಬ ಮಹೋತ್ಸವವನ್ನು  ನಡೆಸಲಾಗುತ್ತದೆ, ಈ ಮಹೋತ್ಸವಕ್ಕೆ ಸಹಸ್ರಾರು ಭಕ್ತ ಜನ ಸಮುವೆ ಹರಿದು ಬರುತ್ತದೆ.

***

 
3 Comments

Posted by on September 26, 2009 in Karekallu betta

 

ಹೊರಕೆರೆದೇವರಪುರ ಜಾತ್ರೆ (Jaatre)

ಜಾತ್ರೆ
_____________________________

ಹೊರಕೆರೆದೇವರಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಜಾತ್ರೆಯು ಪ್ರತಿವರ್ಷ ಮಾರ್ಚ್/ಎಪ್ರಿಲ್ ನಲ್ಲಿ ಬರುವ ಹೋಳಿಹಬ್ಬದ ದಿನ ಆಚರಿಸಲಾಗುತ್ತದೆ, ಈ ಜಾತ್ರೆಯ ಸಮಾರಂಭಕ್ಕೆ ಭಕ್ತಜನ ಸಮೂಹವೇ ಹರಿದು ಬರುತ್ತದೆ.

ಅಂದು ಅಲಂಕೃತವಾದ ರಥದ ಮೇಲೆ ಭಗವಂತನು ಕುಳಿತಾಗ ಸಮಸ್ತ ಭಕ್ತರೂ ರಥವನ್ನು ಭಕ್ತಿಯಿಂದ ಎಳೆಯುತ್ತಾರೆ. ರಥೋತ್ಸವದ ಸಮಯದಲ್ಲಿ ಚಲಿಸುವ ರಥದ ಸುತ್ತ ಗರುಡವು ಹಾರಾಡುತ್ತ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕುವ ಲೀಲೆಯನ್ನು ಭಕ್ತರು ಗಮನಿಸಬಹುದಾಗಿದೆ, ಸದ್ ಭಕ್ತರು ಗರುಡನ ಆಗಮನದ ದಿವ್ಯದರ್ಶನವನ್ನು ಕಂಡು ಪುನೀತರಾಗುತ್ತಾರೆ, ಇದು ಒಂದು ಪವಾಡ ಎಂದೇ ಹೇಳಬಹುದು.

ರಥವನ್ನು ಎಳೆಯುವಾಗ ಬಾಳೆಹಣ್ಣು, ತೂರುಬೆಲ್ಲ, ಮೆಣಸು ಮತ್ತು ಹೂವುಗಳನ್ನು ರಥದ ಮೇಲೆ ತೂರಿ ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ ಭಜನೆಯವರ ಸುಶ್ರಾವ್ಯ ಸಂಗೀತ, ವಾದ್ಯದವರ ನಾದ ವೈಭವ ಮತ್ತು ಇತ್ಯಾದಿ ಸಂಗಮಗೊಂಡ ರಥೋತ್ಸವವು ಸಾಗುತ್ತದೆ. ನಂತರ ನಿಗದಿಯಾದ ಸ್ಥಳಕ್ಕೆ ರಥ ಬಂದು ನಿಲ್ಲುತ್ತದೆ, ಆಗ ಮಹಾಮಂಗಳಾರತಿ ನಡೆಯುತ್ತದೆ.

ಜಾತ್ರೆಯ ಈ ದಿನಗಳಲ್ಲಿ ಸ್ವಾಮಿಗೆ ಕಲ್ಯಾಣೋತ್ಸವ, ಅಶ್ವವಾಹನೋತ್ಸವ, ಅನೆ ಉತ್ಸವ, ಹನುಮಂತೋತ್ಸವ, ಶೇಷೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಮತ್ತು ಹೂವಿನ ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ.

ಈ ಜಾತ್ರೆಯ ಸಮಾರಂಭಕ್ಕೆ ಸಹಸ್ರಾರು ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.

***

 
Leave a comment

Posted by on September 26, 2009 in jaatre

 

Tags:

ಶ್ರೀರಾಮ ದೇವಾಲಯ

 

Srirama

ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಹನುಮಂತ

ಶ್ರೀ ಕ್ಷೇತ್ರ ಹೊರಕೆರೆದೇವರಪುರ ದಲ್ಲಿ ಶ್ರೀರಾಮನ ಪ್ರತಿಷ್ಟಾಪನ ದೇವಾಲಯವಿದ್ದು ಈ ದೇವಾಲಯದಲ್ಲೂ ಕೂಡ ದಿನನಿತ್ಯ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಹಾಗು ದೇವಾಲಯದಲ್ಲಿ ಪ್ರತಿ ಶನಿವಾರದಂದು ಭಜನೆ ನಡೆಯುತ್ತದೆ ಹಾಗು ಗ್ರಾಮದ ಭಕ್ತಾದಿಗಳು ಕೂಡ ಸ್ವಾಮಿಯನ್ನು ಮನೆಗೆ ಕರೆತಂದು ಭಜನೆ ಮಾಡಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
 
ಯುಗಾದಿಹಬ್ಬದಿಂದ ಬರುವ ಶ್ರೀರಾಮನವಮಿಯವರೆಗೆ 9 ದಿನಗಳ ಕಾಲ ಸ್ವಾಮಿಯು ಗ್ರಾಮದ ಎಲ್ಲಾ ದೇವಾಲಯಗಳಿಗೂ ಪ್ರತಿನಿತ್ಯ ಪ್ರದಕ್ಷಿಣೆ ಹಾಕಿಕೊಂಡು ಬರುತ್ತದೆ, ಶ್ರೀರಾಮನವಮಿಯಂದು ವಿಶೇಷವಾದ ಪೂಜೆಗಳು ನಡೆಯುತ್ತವೆ. ಶ್ರೀರಾಮನವಮಿಯಂದು ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಪಾನಕ, ಕೊಸಂಬರಿ ನೀಡಲಾಗುತ್ತದೆ ಹಾಗು ಬಂದ ಭಕ್ತಾಧಿಗಳಿಗೂ.. ಗ್ರಾಮದ ಎಲ್ಲಾ ಜನಕ್ಕು ದೇವಾಂಗ ಸಮಾಜದ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ.
 
ಪ್ರತಿವರ್ಷ ದೇವಾಂಗ ಸಮಾಜದ ವತಿಯಿಂದ ಶ್ರೀರಾಮ ಮಂದಿರದಲ್ಲಿ ಗೌರಿ ಮತ್ತು ಗಣೇಶನನ್ನು ಕೂರಿಸಲಾಗುತ್ತದೆ. ಈ ಪದ್ಧತಿಯು ಸುಮಾರು 50 ವರ್ಷದಿಂದ ನಡೆದುಕೊಂಡು ಬಂದಿದೆ. ಶ್ರೀರಾಮ ದೇವಾಲಯದಲ್ಲಿ ಭವ್ಯವಾದ ಮಂಟಪವನ್ನು ನಿರ್ಮಿಸಿ ಅದ್ಧೂರಿ ಅಲಂಕಾರದೊಂದಿಗೆ ಗೌರಮ್ಮ ಮತ್ತು ಗಣೇಶನನ್ನು 9 ಅಥವಾ 11 ದಿನಗಳ ಕಾಲ ಕೂರಿಸಿ ವಿಶೇಷವಾದ ಪೂಜೆಗಳು ಮಾಡಲಾಗುತ್ತದೆ. ಗೌರಿ ಗಣೇಶವಿರುವ ಆ 9 ದಿನಗಳಲ್ಲಿ ಪ್ರತಿನಿತ್ಯವು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ ಹಾಗು ವಿರಾಠಪರ್ವ (ಭಾರತ ಪುರಾಣ) ಹೇಳಲಾಗುತ್ತದೆ, ದಿನನಿತ್ಯ ಭಕ್ತಾದಿಗಳಿಂದ ಪೂಜೆಗಳು ಗೌರಮ್ಮನಿಗೆ ಬಾಗಿಣ ನಿಡುವ ಮೂಲಕ ಪೂಜೆಯನ್ನು ಸಲ್ಲಿಸುತ್ತಾರೆ.
 
ಗಣೇಶನ ವಿಸರ್ಜನೆಯ ವೇಳೆ ಅದ್ದೂರಿ ಅಲಂಕಾರ ಮಾಡಿ ಗ್ರಾಮದ ಬೇದಿಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ, ಮೆರವಣಿಗೆ ವೇಳೆಯಲ್ಲಿ ಗೊಂಬೆಕುಣಿತ, ಡೋಳುಕುಣಿತದ ಜೊತೆ ಅನೇಕ ವಿಶೇಷ ವೇಷ ಭೂಷಣಗಳನ್ನು ತೊಟ್ಟು ಬೇದಿಬೀದಿಗಳಲ್ಲಿ ಕುಣಿದು ಸಂತೋಷ ಪಡುತ್ತಾರೆ, ಈ ಮೆರವಣಿಯು ಗ್ರಾಮದ ಕಲ್ಯಾಣಿಯವರೆಗೂ ಸಾಗುತ್ತದೆ. ಕಲ್ಯಾಣಿ ಬಳಿ ಬಂದ ಮೇಲೆ ಗೌರಮ್ಮ ಮತ್ತು ಗಣೇಶನ ಮೇಲಿನ ಹಾರಗಳನ್ನು ಹರಾಜುಮಾಡಲಾಗುತ್ತದೆ ಭಕ್ತಾದಿಗಳು ಆ ಹಾರಗಳನ್ನು ಹರಾಜಿನಮೂಲಕ ಕರಿದಿಸುತ್ತಾರೆ ನಂತರ ಅಲ್ಲಿ ನೆರೆದಿಂದ ಭಕ್ತಾದಿಗಳಿಗೆ ಪ್ರಸಾದ ವನ್ನು ನೀಡಲಾಗುತ್ತದೆ ನಂತರ ಗಣೇಶನನ್ನು ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದು ಪ್ರತಿವರ್ಷವು ನಡೆದು ಕೊಂಡು ಬಂದಿದೆ.
 

ನೀವು ನೋಡುತಿರುವ ದೃಶ್ಯ  2009 ರಲ್ಲಿ ಕೂರಿಸಲಾದ ಗೌರಮ್ಮ ಮತ್ತು ಗಣೇಶ ಹಬ್ಬದ ಫೋಟೋ

***

 
1 Comment

Posted by on September 19, 2009 in Sri Rama Temple

 

Tags: , ,

ದೇವಾಲಯದ ಆವರಣ (Temple view)

ಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಆವರಣ

ಹೊರಕೆರೆದೇವರಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಗರ್ಭಗುಡಿಯೆಲ್ಲವು ಹುತ್ತಮಯ ವಾಗಿದ್ದು, ಚೋಳರ ವಾಸ್ತು ಶಿಲ್ಪದ ವಿನ್ಯಾಸ ಹೊ೦ದಿರುವ ಪುರಾತನವಾದ ದೇವಾಲಯವಾಗಿದೆ. ದೇವಸ್ತಾನದ ಗೋಪುರದಲ್ಲಿರುವ ಬಾಗಿಲುಗಳನ್ನು ಹಿಂದೂ, ಮುಸ್ಲಿಂ, ಜೈನ ಧರ್ಮಗಳ ಅನುಗುಣವಾಗಿ ಫಟ್ಟಿಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದೊಳಗೆ ಗರುಡ ಸನ್ನಿಧಿ, ಬಾಣದೇವರ ಸನ್ನಿಧಿ, ಅಂಜನೇಯ ಸನ್ನಿಧಿ, ಶಂಕರ-ನಾರಾಯಣ ಸನ್ನಿಧಿ, ಮಹಾಲಕ್ಷ್ಮಿ ಸನ್ನಿಧಿ, ಶ್ರೀಪಾದ ಸನ್ನಿಧಿ, ಬೃಂದಾವನ, ವೇಣುಗೋಪಾಲ ಸನ್ನಿಧಿ, ಬ್ಯೆರವೇಶ್ವರ ಸನ್ನಿಧಿ, ಭೂತದೇವರ ಸನ್ನಿಧಿ, ಗಣೇಶ ಸನ್ನಿಧಿ, ಮೊದಲಾದವೂ ಉಂಟು. ಈ ದೇವಸ್ಥಾನವು ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೂ ಸೇರಿದ್ದು, ಈ ಕ್ಷೇತ್ರಕ್ಕೆ ಬರುವ ಭಕ್ತರಿಗೆಲ್ಲ ಪ್ರತಿ ಶನಿವಾರವೂ ಊಟದ ವ್ಯವಸ್ಥೆ ಇದೆ

 
 
***
 
 
2 Comments

Posted by on September 4, 2009 in Temple View

 

Tags: , , ,