ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿನ ಏಳುಸುತ್ತಿನ ಕೋಟೆ ಎಂದೇ ಹೆಸರಾದಿರುವ ಚಿತ್ರದುರ್ಗಕ್ಕೆ ಕೇವಲ 28 ಕಿ .ಮೀ ದೂರದಲ್ಲಿರುವ ಒಂದು ಪುಣ್ಯ ಕ್ಷೇತ್ರವೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ನೆಲೆಸಿರುವ ಹೊರಕೆರೆದೇವರಪುರ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೊರಕೆರೆದೇವರಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವೇದ ಮಂತ್ರ, ಘೋಷಗಳ ನಾದದಲ್ಲಿ ವಿಜೃಂಭಣೆಯಿಂದ ಇದೆ ಮಾರ್ಚ್ 1 ಸೋಮವಾರದಂದು ನೆರವೇರಿತು. ಮಧ್ಯಾಹ್ನ 4:30 ಕ್ಕೆ ಸರಿಯಾಗಿ ಭಕ್ತರು ರಥವನ್ನು ಭಕ್ತಿಯಿಂದ ಎಳೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.
ರಥವನ್ನು ಎಳೆಯುವಾಗ ಬಾಳೆಹಣ್ಣು, ತೂರುಬೆಲ್ಲ, ಮೆಣಸು ಮತ್ತು ಹೂವುಗಳನ್ನು ರಥದ ಮೇಲೆ ತೂರಿ ಭಕ್ತರು ತಮ್ಮ ಭಕ್ತಿಯನ್ನು ಅರ್ಪಿಸಿದರು. ರಥೋತ್ಸವದ ಸಮಯದಲ್ಲಿ ಚಲಿಸುವ ರಥದ ಸುತ್ತ ಗರುಡವು ಹಾರಾಡುತ್ತ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕುವ ಲೀಲೆಯ ದಿವ್ಯದರ್ಶನವನ್ನು ಕಂಡು ಭಕ್ತರು ಪುನೀತರಾದರು. ಹಾಗು ಮರು ದಿನ ಬೆಳಗಿನ ಜಾವ 4.30ಕ್ಕೆ ಮತೊಮ್ಮೆ ರಥವನ್ನು ಎಳೆಯಲಾಯಿತು, ಮಾರ್ಚ್ 2 ರಂದು ಭೂತಬಲಿಸೇವಾ, ಶೇಷೋತ್ಸವ, ಪೀಠೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ, ಅಶ್ವ ವಾಹನೋತ್ಸವ, ಪಾರ್ವಟೋತ್ಸವಗಳು ನಡೆಯಿತು. ಮಾರ್ಚ್ 3 ರಂದು ಓಕಳಿ ಉತ್ಸವ, ನವಿಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವಗಳು ನಡೆಯಿತು. ಮಾರ್ಚ್ 4 ರಂದು ಸೂರ್ಯ ಮಂಡಲೋತ್ಸವ, ಶಯನೋತ್ಸವಗಳು ನಡೆಯಿತು.
ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಬಾಗವಹಿಸಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಕೃಪೆಗೆ ಪಾತ್ರರಾದರು.
arun. m.h
March 9, 2010 at 9:37 AM
nice xplaination